ಉಸಿರೇ.. ಉಸಿರೇ (Usire usire) – ಹುಚ್ಚಾ

“ಉಸಿರೇ.. ಉಸಿರೇ” ಎಂಬ ಹಾಡು ಚಿತ್ರದ “ಹುಚ್ಚಾ”ಗೆ ಸಂಬಂಧಿಸಿದ ಚಿರಪರಿಚಿತ ಗೀತೆಯಾಗಿದೆ. ಈ ಹಾಡನ್ನು ರಚಿಸಿದ್ದಾರೆ ಹಾಗೂ ಹಾಡಿದ್ದಾರೆ ರಾಜೇಶ್ ಕೃಷ್ಣನ್. ಚಲನಚಿತ್ರದ ಕಥೆ ಮತ್ತು ಆಕರ್ಷಣೀಯ ಸಾಹಿತ್ಯದಲ್ಲಿ ಈ ಹಾಡು ಒಂದು ಪ್ರಮುಖ ಸ್ಥಾನವನ್ನು ಪಡೆದಿದೆ. ಸಂಗೀತ ಸಂಜೀವನಕ್ಕೆ ಅನುಕೂಲವನ್ನು ನೀಡಿದ್ದಾರೆ ರಾಜೇಶ್ ರಾಮನಾಥ್ ಅವರು. ಈ ಚಿತ್ರದಲ್ಲಿ ಹಾಡು ಹೊತ್ತ ಚಿರಕಾಲದ ಗೀತೆಯ ರಚನೆಗೆ ಕೆ. ಕಲ್ಯಾಣ್ ಅವರು ಸಾಹಿತ್ಯವನ್ನು ಬರೆದಿದ್ದಾರೆ.

ಹಾಡುಉಸಿರೇ.. ಉಸಿರೇ
ಚಲನಚಿತ್ರಹುಚ್ಚಾ
ಸಾಹಿತ್ಯಕೆ. ಕಲ್ಯಾಣ್
ಸಂಗೀತರಾಜೇಶ್ ರಾಮನಾಥ್
ಗಾಯನರಾಜೇಶ್ ಕೃಷ್ಣನ್

ಉಸಿರೇ.. ಉಸಿರೇ..
ಈ ಉಸಿರ ಕೊಲ್ಲಬೇಡ
ಪ್ರೀತಿ.. ಹೆಸರಲೀ …
ಈ ಹೃದಯ ಗೆಲ್ಲಬೇಡ
ಕಣ್ಣೀರಲೆ ಬೇಯುತಿದೆ ಮನಸು
ನೋವಲ್ಲಿಯೂ ಕಾಯುತಿದೆ ಕನಸು
ಉಸಿರಲೇ……. ಪ್ರೀತಿಸು……
ಈ ಉಸಿರನೇ….. ಪ್ರೀತಿಸು….
ಬಾ ಒಂದೇ ಒಂದು ಸಾರಿ ನನ್ನ ಪ್ರೀತಿಸು
ಉಸಿರೇ.. ಉಸಿರೇ..
ಈ ಉಸಿರ ಕೊಲ್ಲಬೇಡ
ಪ್ರೀತಿ.. ಹೆಸರಲೀ..
ಈ ಹೃದಯ ಗೆಲ್ಲಬೇಡ

ಬಾನಿಗೆ ಬಣ್ಣ ಹಚ್ಚೊ ಕಣ್ಣಿನವಳು..
ಕಣ್ಣಿಗೆ ಬಟ್ಟೆ ಕಟ್ಟಿ ಪ್ರೀತಿಸಿದಳು
ನಿನ್ ಪ್ರೀತಿಗಿಲ್ಲಿ ಯಾವ ಬಣ್ಣ ಹೇಳು
ನೀ ಬಣ್ಣ ಹಚ್ಚೊ ಮುಂಚೆ ಸ್ವಲ್ಪ ಹೇಳು
ಓ.. ಭೂಮಿಗೆ ಬೇಲಿ ಕಟ್ಟೊ ನಗೆಯವಳು
ಬಾಯಿಗೆ ಬೀಗ ಹಾಕಿ ಪ್ರೀತಿಸಿದಳು
ಪ್ರೀತಿಸಿದ ಮರು ಕ್ಷಣವೇ
ಅವಳೇ ನನ್ನುಸಿರು……
ಉಸಿರಲೇ .. ಜೀವಿಸು..
ಈ ಉಸಿರನೇ… ಸೇವಿಸು…
ಬಾ ಒಂದೇ ಒಂದು ಸಾರಿ ನನ್ನ ಪ್ರೀತಿಸು..

ಉಸಿರೇ.. ಉಸಿರೇ..
ಈ ಉಸಿರ ಕೊಲ್ಲಬೇಡ
ಪ್ರೀತಿ.. ಹೆಸರಲಿ..
ಈ ಹೃದಯ ಗೆಲ್ಲ ಬೇಡ

ಹಾರುವ ಹಕ್ಕಿಗಳ ಜೊತೆಯವಳು
ರೆಕ್ಕೆಯ ಮೇಲೆ ತಂದು ಕೂರಿಸಿದಳು
ನಿನ್ ಪ್ರೀತಿ ಹಾರೋ ದೂರ ಎಷ್ಟು ಹೇಳು
ನೀ ಹಾರೊವಾಗ ಕಾಣುಸ್ತಿವ ಹೇಳು
ಓ.. ಮೀನಿನ ಹೆಜ್ಜೆ ಮೇಲೆ ನಡೆವವಳು
ಬಂದರು ಬಾರದಿದ್ರು ಹೇಳದವಳು
ಪ್ರೀತಿಸುವ ಕ್ಷಣ ಮಾತ್ರ..
ಪ್ರೀತಿ ಬಲು ಸುಲಭ……..
ಉಸಿರಲೇ… ಅರಳಿಸು..
ನನ್ನುಸಿರನೇ… ಮರಳಿಸು..
ಬಾ ಒಂದೇ ಒಂದು ಸಾರಿ ನನ್ನ ಪ್ರೀತಿಸು
ಉಸಿರೇ.. ಉಸಿರೇ..
ಈ ಉಸಿರ ಕೊಲ್ಲಬೇಡ
ಪ್ರೀತಿ ಹೆಸರಲಿ ಈ ಹೃದಯ ಗೆಲ್ಲ ಬೇಡ
ಕಣ್ಣೇರಲೆ ಬೇಯುತಿದೆ ಮನಸು
ನೋವಲ್ಲಿಯೂ ಕಾಯುತಿದೆ ಕನಸು
ಉಸಿರಲೇ.. ಪ್ರೀತಿಸು..
ಈ ಉಸಿರನೇ.. ಪ್ರೀತಿಸು..
ಹೂಹುಂ ಆಹಾ ನನ್ನ ಪ್ರೀತಿಸು

Leave a Comment