ಜಗವೇ ನೀನು ಗೆಳತಿಯೇ (Jagave Neenu Gelathiye) – ಲವ್ 360

“ಜಗವೇ ನೀನು ಗೆಳತಿಯೇ” ಎಂಬ ಹಾಡು ಶಶಾಂಕ್ ಅವರ ಸಾಹಿತ್ಯದಲ್ಲಿ, ಅರ್ಜುನ್ ಜನ್ಯ ಅವರ ಸಂಗೀತದಲ್ಲಿ ಹಾಡಲ್ಪಟ್ಟಿದೆ ಮತ್ತು ಗಾಯನ ವಹಿಸಿದ್ದಾರೆ ಸಿದ್ ಶ್ರೀರಾಮ್. ಈ ಹಾಡು ಚಲನಚಿತ್ರ “ಲವ್ 360” ಗೆ ಸಂಬಂಧಿಸಿದ್ದು, ಇದು ಒಂದು ರೋಮಾಂಟಿಕ್ ಚಿತ್ರದಲ್ಲಿ ಅನುಕರಣೀಯ ಮುಹೂರ್ತಗಳನ್ನು ಮುಖ್ಯಪಟ್ಟಿದೆ

ಹಾಡುಜಗವೇ ನೀನು ಗೆಳತಿಯೇ
ಚಲನಚಿತ್ರಲವ್ 360
ಸಾಹಿತ್ಯಶಶಾಂಕ್
ಸಂಗೀತಅರ್ಜುನ್ ಜನ್ಯ
ಗಾಯನಸಿದ್ ಶ್ರೀರಾಮ್

ಮರುಭೂಮಿ ನಡುವಲ್ಲಿ ಕಂಡ
ಓ ಚಿಲುಮೆಯೇ
ಕನಸುಗಳ ರಾಶಿಯನು ತಂದ
ಓ ಚೆಲುವೆಯೇ

ಒಣ ಒಂಟಿ ಜೀವದಾ ಕೂಗಿಗೆ
ತಂಗಾಳಿ ತಂದ ಓ ದೈವವೇ
ನಿನಗೇನು ನಾನು ನೀಡಲೇ

ಜಗವೇ ನೀನು ಗೆಳತಿಯೆ
ನನ್ನ ಜೀವದಾ ಒಡತಿಯೆ
ಉಸಿರೇ ನೀನು ಗೆಳತಿಯೆ
ನನ್ನನ್ನು ನಡೆಸೋ ಸಾಥಿಯೇ

ಜಗವೇ ನೀನು

ಖುಷಿ ಎಲ್ಲ ಕಲೆ ಹಾಕಿ
ನಿನಗಾಗಿ ನಾನು ಹೊತ್ತು ತರುವೆ
ನಿನ್ನ ಕನಸೆಲ್ಲ ನಾ ನನಸು ಮಾಡುವೆ

ಯಾರಿರಲಿ ಎದುರಲ್ಲಿ
ನಾನೆಂದು ನಿನ್ನ ಮುಂದೆ ನಿಲ್ಲುವೆ
ನೋವೇ ಬರದಂತೆ ಪ್ರತಿ ನಿಮಿಷ ಕಾಯುವೆ

ನಡೆಯುವೆ ಜೊತೆ ನೆರಳಂತೆ
ಬಯಸುವೆ ಕೊನೆ ಇರದಂತೆ
ಮುಳುಗಡೆಯ ಭೀತಿಯ ಬದುಕಿಗೆ
ನೆರವಾಗಿ ಬಂದ ಓ ದೈವವೇ
ನಿನಗೇನು ನಾನು ನೀಡಲೇ

ಜಗವೇ ನೀನು ಗೆಳತಿಯೇ
ನನ್ನ ಜೀವದಾ ಒಡತಿಯೆ
ಉಸಿರೇ ನೀನು ಗೆಳತಿಯೆ
ನನ್ನನ್ನು ನಡೆಸೋ ಸಾಥಿಯೇ

ಜಗವೇ ನೀನು

Leave a Comment