Sukha Ellarigellaithavva (ಸುಖ ಎಲ್ಲಾರಿಗೆಲ್ಲೈತವ್ವ) – Janapada Geete

Sukha Ellarigellaithavva

ಸುಖ ಎಲ್ಲಾರಿಗೆಲ್ಲೈತವ್ವ ದುಃಖ ತುಂಬ್ಯಾದೆ ಮರುತ್ಯಾದ ಮ್ಯಾಲೆ ತಾ ಮಾಡಿದ ಪಾಪ ತಾ ಕಳೆಯಬೇಕ ಶಿವನ ಮ್ಯಾಲ್ಯಾಕ ಸಿಟ್ಟಾಗಬೇಕ || ಸತ್ಯವಂತನಾದ ಹರಿಶ್ಚಂದ್ರ ರಾಜಾ ಹೆಂಡತಿ ಮಕ್ಕಳ ಮಾರಿ ಋಣವ ತೀರಿಸಿದ ಹೊಲೆಯಗೆ ಹಾಳಾಗಿ ಸುಡುಗಾಡ ಕಾಯ್ದ || ತಂದೆ ಮಾತಿಗಾಗಿ ಶ್ರೀರಾಮಚಂದ್ರ ಹದಿನಾಲ್ಕು ವರುಷ ವನವಾಸಕ್ಹೋದ ಸೀತೆಯ ಕಳಕೊಂಡು ಬಲು ಕಷ್ಟಪಟ್ಟ || ಕೌರವರ ಮೋಸಾದಿ ಪಂಚಪಾಂಡವರು ರಾಜ್ಯ ಕೋಶ ಬಿಟ್ಟು ಬವಣೆ ಪಟ್ಟರು ಅಪಮಾನಗಳನೆಲ್ಲಾ ಸೈರಿಸಿಕೊಂಡರು ||